ತಾಂತ್ರೀಕತೆಯ ವಿವರ


ಬೇಸಾಯ ಚಟುವಟಿಕೆಗಳಾದ ಉಳುಮೆ, ಬಿತ್ತನೆ ಹಾಗೂ ಅಂತರ ಬೇಸಾಯ ಚಟುವಟಿಕೆಗಳನ್ನು ಇಳಿಜಾರಿಗೆ ಅಡ್ಡಲಾಗಿ ನಿರ್ವಹಿಸಬೇಕು.

ನಿರೀಕ್ಷಿತ ಫಲಿತಾಂಶ


ಇಳಿಜಾರಿಗೆ ಅಡ್ಡಲಾದ ಬೇಸಾಯದಿಂದ ಮಣ್ಣು ಕೊಚ್ಚಣೆ ಕುಂಠಿತಗೊಳ್ಳುತ್ತದಲ್ಲದೆ ಮಳೆನೀರು ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನಲ್ಲಿ ಇಂಗುತ್ತದೆ. ಇದರಿಂದ ಶೇ. 15-20 ರಷ್ಟೂ ಬೆಳೆಯ ಇಳುವರಿ ಅಧಿಕವಾಗುವುದು.

ಉಪಯೋಗ


ಮಣ್ಣು ಮತ್ತು ನೀರು ಸಂರಕ್ಷಣೆಯಿಂದ ಮಣ್ಣಿನ ಆರೋಗ್ಯ ವೃದ್ಧಿಯಾಗುವುದಲ್ಲದೆ, ಬೆಳೆಗೆ ಬರ ಸಹಿಷ್ಣತಾ ಅವಧಿ ಹೆಚ್ಚುತ್ತದೆ.

ಖರ್ಚಿನ ಉಳಿತಾಯ


ಒಟ್ಟರೆ ಖರ್ಚಿನಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ, ಬೆಳೆಯ ಇಳುವರಿ ಶೇ. 15-20 ಹೆಚ್ಚಳವಾಗುವುದರಿಂದ, ನಿವ್ವಳ ಆದಾಯವು ಶೇ 20-25 ರಷ್ಠೂ ಹೆಚ್ಚುತ್ತದೆ

Comments

  1. ನಾವು ಉತ್ತರ ಕರ್ನಾಟಕ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಿಪ್ಪರ್ಗ ಘಾಟ್ ಗ್ರಾಮ

    ನಿಮ್ಮ ಈ website ಗೆ ಹುತ್ಪೂರ್ವಕ್ ಧನ್ಯವಾದಗಳು ಮತ್ತು ಸುಸ್ವಾಗತ!!

    ನಿಮ್ಮಿಂದ ಈ ಕಡೆಯ ಜನರಿಗೆ ತುಂಬಾ ಉಪಯೋಗ ಆಗುತ್ತೆ
    ಅಂತ ಬಯಸುತ್ತೇನೆ

Leave a Reply

Your email address will not be published. Required fields are marked *